e shram card benefits:- ಸರಕಾರದಿಂದ ಪ್ರತಿ ತಿಂಗಳು 3000 ಹಣ ಸಿಗುತ್ತೆ.! ಈ ಯೋಜನೆಗೆ ಅರ್ಜಿ ಸಲ್ಲಿಸಿ!
ಮಹಿಳೆಯರಿಗೆ ಮತ್ತು ಪುರುಷರಿಗೆ ಇದೀಗ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ.! ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದಂತ ವ್ಯಕ್ತಿಗಳಿಗೆ ಪ್ರತಿ ತಿಂಗಳು 3000 ಹಣ ಸಿಗುತ್ತೆ.
ಹೌದು ಸ್ನೇಹಿತರೆ ನಮ್ಮ ಕೇಂದ್ರ ಸರ್ಕಾರ ಇದೀಗ ಇ ಶ್ರಮ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಕೆ ಮಾಡಿದಂತ ಮಹಿಳಾ ಮತ್ತು ಪುರುಷರಿಗೆ ಪ್ರತಿ ತಿಂಗಳು 3000 ಹಣ ನೀಡಲಾಗುತ್ತದೆ. ಆದ್ದರಿಂದ ನಾವು ಈ ಲೇಖನಿಯ ಮೂಲಕ ಕೇಂದ್ರ ಸರ್ಕಾರದ ಈ ಯೋಜನೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯು ಕೂಡ ತಿಳಿಯೋಣ
ಇ ಶ್ರಮ ಕಾರ್ಡ್ ಯೋಜನೆ (e shram card benefits).?
ನಮ್ಮ ಕೇಂದ್ರ ಸರ್ಕಾರ ನಮ್ಮ ಭಾರತ ದೇಶದಲ್ಲಿ ಇರುವಂತ ಬಡ ವರ್ಗದ ಜನರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಮತ್ತು ರೈತ ಕುಟುಂಬಗಳಿಗೆ ವೃದ್ಧಾಪ್ಯ ಜೀವನದಲ್ಲಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪಿಎಂ ಶ್ರಮ ಯೋಗಿ ಮನ್‌ಧಾನ್ ಯೋಜನೆ ಅಥವಾ ಈ ಶ್ರಮ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದೆ.

ಈ ಒಂದು ಯೋಜನೆಯ ಮೂಲಕ ಅರ್ಜಿ ಸಲ್ಲಿಕೆ ಮಾಡಿದಂತ ಕುಟುಂಬಗಳಿಗೆ ಅಥವಾ ವ್ಯಕ್ತಿಗಳಿಗೆ 60 ವರ್ಷ ದಾಟಿದ ನಂತರ ಅಂದರೆ ವಯಸ್ಸಾದಂತ ಸಂದರ್ಭದಲ್ಲಿ ಪ್ರತಿ ತಿಂಗಳು 3000 ಹಣವನ್ನು ಪಿಂಚಣಿ ರೂಪದಲ್ಲಿ ನೇರವಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯ ಖಾತೆಗೆ ಜಮಾ ಮಾಡಲಾಗುತ್ತದೆ. ಹಾಗಾಗಿ ಈ ಒಂದು ಯೋಜನೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತಿದೆ
ಈ ಶ್ರಮ ಕಾರ್ಡ್ ಯೋಜನೆಯ ಪ್ರಯೋಜನಗಳೇನು.?
ಸ್ನೇಹಿತರ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ಶ್ರಮ ಯೋಗಿ ಮನ್‌ಧಾನ್ ಯೋಜನೆ ಅಥವಾ ಈ ಶ್ರಮ ಕಾರ್ಡ್ ಯೋಜನೆ ಅರ್ಜಿ ಸಲ್ಲಿಸಿದಂತ ವ್ಯಕ್ತಿಗಳಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ತಿಳಿಸಿದ್ದೇವೆ.
ಪ್ರತಿ ತಿಂಗಳು ₹3,000/- ಮಾಸಿಕ ಪಿಂಚಣಿ:– PM ಶ್ರಮ ಯೋಗಿ ಮನ್‌ಧಾನ್ (e shram card benefits) ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ ಅರ್ಜಿದಾರರಿಗೆ 60 ವರ್ಷ ದಾಟಿದ ನಂತರ ಮಾತ್ರ. ಹೌದು ಸ್ನೇಹಿತರೆ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದಂತ ವ್ಯಕ್ತಿಗೆ 60 ವರ್ಷ ವಯಸ್ಸು ಆದ ನಂತರ ಪ್ರತಿ ತಿಂಗಳು 3000 ಹಣವನ್ನು ಪಿಂಚಣಿ ರೂಪದಲ್ಲಿ ಈ ಯೋಜನೆ ಮೂಲಕ ಪಡೆದುಕೊಳ್ಳಲು ಅರ್ಹತೆ ಹೊಂದಿರುತ್ತಾರೆ ಹಾಗೂ ನೇರವಾಗಿ ಹಣವನ್ನು ಅರ್ಜಿದಾರರ ಖಾತೆಗೆ ಪ್ರತಿ ತಿಂಗಳು ವರ್ಗಾವಣೆ ಮಾಡಲಾಗುತ್ತದೆ

2 ಲಕ್ಷ ರೂಪಾಯಿವರೆಗೆ ವಿಮೆ ಸೌಲಭ್ಯ:- ಪಿಎಂ ಶ್ರಮ ಯೋಗಿ ಮನ್‌ಧಾನ್ ಯೋಜನೆ ಅಥವಾ ಇ ಶ್ರಮ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದರೆ ಅರ್ಜಿದಾರರಿಗೆ ಯಾವುದೇ ಕೆಲಸ ಮಾಡುವಂತಹ ಸಂದರ್ಭದಲ್ಲಿ ಅಥವಾ ಇತರ ಯಾವುದೇ ಸಂದರ್ಭದಲ್ಲಿ ಅಪಘಾತದಿಂದ ಮರಣ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಅರ್ಜಿ ಸಲ್ಲಿಕೆ ಮಾಡಿದ ಅರ್ಜಿದಾರರ ಕುಟುಂಬದವರಿಗೆ ಎರಡು ಲಕ್ಷ ರೂಪಾಯಿವರೆಗೆ ಜೀವ ವಿಮೆ ಅಥವಾ ಅಪಘಾತ ವಿಮೆ ನೀಡಲಾಗುತ್ತದೆ
1 ಲಕ್ಷ ರೂಪಾಯಿವರೆಗೆ ಹಣ ಸಹಾಯ:- ಪಿಎಂ ಶ್ರಮ ಯೋಗಿ ಮನ್‌ಧಾನ್ ಯೋಜನೆ ಅಥವಾ ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಿದಂತ ಕೆಲಸ ಮಾಡುವ ಸಂದರ್ಭದಲ್ಲಿ ಅಥವಾ ಅಪಘಾತದಲ್ಲಿ ಶಾಶ್ವತ ಅಂಗವಿಕಲತೆ ಉಂಟಾದರೆ ಅರ್ಜಿ ಸಲ್ಲಿಸಿದಂತ ವ್ಯಕ್ತಿಗೆ ಒಂದು ಲಕ್ಷ ರೂಪಾಯಿವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ
ಇ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು..?
ಈ ಯೋಜನೆಯ ಲಾಭ ಪಡೆಯಲು ಬಯಸುವ ಅರ್ಜಿದಾರರು ಕೂಲಿ ಕಾರ್ಮಿಕ, ರೈತರು, ಕೃಷಿ ಕಾರ್ಮಿಕರು, ದಿನಗೂಲಿ ಕೆಲಸ ಮಾಡುವವರು, ಆಟೋರಿಕ್ಷಾ ಓಡಿಸುವವರು, ಹೂ ಮಾರುವವರು, ಅಸಂಘಟಿತ ವಲಯದ ಕೂಲಿ ಕಾರ್ಮಿಕರು, ಹಾಗೂ ತಿಂಗಳಿಗೆ ಯಾವುದೇ ನಿರ್ದಿಷ್ಟ ಸಂಬಳ ಇಲ್ಲದಂತ ವ್ಯಕ್ತಿಗಳು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು
ಈ ಯೋಜನೆಯ ಲಾಭ ಪಡೆಯಲು ಬಯಸುವ ಅರ್ಜಿದಾರರು ಕಡ್ಡಾಯವಾಗಿ 18 ವರ್ಷ ವಯೋಮಿತಿ ಹೊಂದಿರಬೇಕು ಹಾಗೂ 59 ವರ್ಷದ ಒಳಗಿನವರು ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ
ಈ ಯೋಜನೆಯ ಲಾಭ ಪಡೆಯಲು ಬಯಸುವ ಅರ್ಜಿದಾರ ಕುಟುಂಬದ ವಾರ್ಷಿಕ ಆದಾಯವು 2 ಲಕ್ಷ ರೂಪಾಯಿ ಮಿತಿ ಒಳಗಡೆ ಇರಬೇಕಾಗುತ್ತದೆ
ಈ ಯೋಜನೆಗೆ ಅರ್ಜಿ ಸಲ್ಲಿಸಲು ಸರಕಾರಿ ಉದ್ಯೋಗಿಗಳಿಗೆ ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮತ್ತು ಉನ್ನತ ಸಂಬಳ ತರುವಂತ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ
ಅರ್ಜಿ ಸಲ್ಲಿಕೆ ಮಾಡಲು ಬೇಕಾಗುವ ದಾಖಲಾತಿಗಳು..?
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ವೋಟರ್ ಐಡಿ
- ರೇಷನ್ ಕಾರ್ಡ್
- ಇತರೆ ಅಗತ್ಯ ದಾಖಲಾತಿಗಳು
ಇ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ..?
ಕೇಂದ್ರ ಸರ್ಕಾರದ ಪಿಎಂ ಶ್ರಮ ಯೋಗಿ ಮನ್‌ಧಾನ್ ಯೋಜನೆ ಅಥವಾ ಈ ಶ್ರಮ ಕಾರ್ಡ್ ಯೋಜನೆಗೆ ನೀವು ಅರ್ಜಿ ಸಲ್ಲಿಕೆ ಮಾಡಲು ಬಯಸುತ್ತಿದ್ದೀರಾ ಹಾಗಾದ್ರೆ ಮೊದಲು ಕೇಂದ್ರ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರ ತಿಳಿದುಕೊಳ್ಳಿ ನಂತರ ಕೆಳಗಡೆ ನೀಡಿದ ಲಿಂಕ್ ಬಳಸಿಕೊಂಡು ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಕೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಮೇಲೆ ಕೊಟ್ಟಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಪಿಎಂ ಶ್ರಮ ಯೋಗಿ ಮನ್‌ಧಾನ್ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮಗೆ ಹತ್ತಿರವಿರುವ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಿ
sslc exam 3 results: SSLC ಪರೀಕ್ಷೆ-3 ರ ಫಲಿತಾಂಶ ಈ ದಿನ ಬಿಡುಗಡೆ.! ತಕ್ಷಣ ರಿಸಲ್ಟ್ ಚೆಕ್ ಮಾಡಿ
ಸ್ನೇಹಿತರೆ ಇದೇ ರೀತಿ ನಿಮಗೆ ಸರಕಾರದ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಬಗ್ಗೆ ಪ್ರತಿದಿನ ಹೊಸ ವಿಷಯಗಳು ತಿಳಿದುಕೊಳ್ಳಲು ಆಸಕ್ತಿ ಇದೆಯಾ ಹಾಗಾದರೆ ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಿ