Ration Card Application: ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಮತ್ತೆ ಅವಕಾಶ, ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಪ್ರಾರಂಭ

(Ration Card Application) ರೇಷನ್ ಕಾರ್ಡ್ (Ration card) ತಿದ್ದುಪಡಿ” ಮಾಡಲು ಮತ್ತೆ ಅವಕಾಶ, ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಪ್ರಾರಂಭ

WhatsApp Group Join Now
Telegram Group Join Now       

ನಮಸ್ಕಾರ ಸ್ನೇಹಿತರೆ, ತುಂಬಾ ಜನರು ಇದೀಗ ತಮ್ಮ “ರೇಷನ್ (Ration card) ಕಾರ್ಡ್” ನಲ್ಲಿ ಹೊಸ (family members) ಸದಸ್ಯರನ್ನು ಸೇರ್ಪಡೆ ಮಾಡಲು ಹಾಗೂ ಮದುವೆಯಾದಂತ ಮನೆಯಲ್ಲಿ ಸೊಸೆ ಹೆಸರು ಸೇರ್ಪಡೆ ಮಾಡಲು ಹಾಗೂ ಹುಟ್ಟಿದ ಮಕ್ಕಳ ಹೆಸರು ಸೇರ್ಪಡೆ ಮಾಡಲು ಕಾಯುತ್ತಿದ್ದಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ.

ಹೌದು ಸ್ನೇಹಿತರೆ ಇದೀಗ ಮತ್ತೆ ನಮ್ಮ ರಾಜ್ಯ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಟ್ಟಿದೆ, ಹೌದು ಸ್ನೇಹಿತರೆ ಈ ಹಿಂದೆ ಕರ್ನಾಟಕ ರಾಜ್ಯ ಸರ್ಕಾರ ಪಡಿತರ ಚೀಟಿ ತಿದ್ದುಪಡಿ ಮಾಡಲು ಸುದೀರ್ಘವಾದ ಅವಕಾಶ ನೀಡಿತ್ತು ಆದರೆ ಕೆಲವೊಂದು ಕಾರಣಗಳಿಂದ ತುಂಬಾ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಲು ಸಾಧ್ಯವಾಗಿಲ್ಲ ಇದೀಗ ಮತ್ತೆ ಪಡಿತರ ಚೀಟಿ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಆದ್ದರಿಂದ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಬೆಂಬಲವನ್ನು ತಿಳಿದುಕೊಳ್ಳೋಣ

 

ರೇಷನ್ ಕಾರ್ಡ್ ತಿದ್ದುಪಡಿ (Ration Card Application) ಪ್ರಾರಂಭ..?

ಸಾಕಷ್ಟು ಕುಟುಂಬಗಳು ತಮ್ಮ ಪಡಿತರ ಚೀಟಿಯಲ್ಲಿ ಹೊಸದಾಗಿ ಮದುವೆಯಾದ ಅಂತ ದಂಪತಿಗಳ ಹೆಸರು ಸೇರ್ಪಡೆ ಮಾಡಲು ಹಾಗೂ ಮನೆಯಲ್ಲಿ ಹುಟ್ಟಿದಂತ ಮಕ್ಕಳ ಹೆಸರು ಸೇರ್ಪಡೆ ಮಾಡಲು ಮತ್ತು ಇತರ ಸದಸ್ಯರ ಹೆಸರು ಸೇರ್ಪಡೆ ಮಾಡಲು ಕಾಯುತ್ತಿದ್ದಾರೆ ಅಂತವರಿಗೆ ಇದೀಗ ಆಹಾರ ಇಲಾಖೆ ಸಿಹಿ ಸುದ್ದಿ ನೀಡಿದೆ.

Ration Card Application
Ration Card Application

 

ಹೌದು ಸ್ನೇಹಿತರೆ ಕುಟುಂಬದಲ್ಲಿ ಇರುವಂತ ಹೊಸ ಸದಸ್ಯರನ್ನು ಹಾಗೂ ಮಕ್ಕಳನ್ನು ಇದೀಗ ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ,

ಆಹಾರ (Food Department) ಇಲಾಖೆ ಮಾಹಿತಿ ನೀಡಿರುವ ಪ್ರಕಾರ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಲು ಅಥವಾ ಹೊಸದ ಸದಸ್ಯರನ್ನು ಸೇರಿಸಲು ಮತ್ತು ರೇಷನ್ ಕಾರ್ಡಿಗೆ ಸಂಬಂಧಿಸಿದ ಇತರ ಯಾವುದೇ ತಿದ್ದುಪಡಿ ಮಾಡಲು ಜುಲೈ 31ನೇ ತಾರೀಕಿನವರೆಗೆ ಸುಧೀರ್ಘವಾಗಿ ಅವಕಾಶ ಮಾಡಿಕೊಡಲಾಗಿದೆ.

 

ರೇಷನ್ ಕಾರ್ಡ್ ನಲ್ಲಿ ಯಾವ ಬದಲಾವಣೆ ಮಾಡಬಹುದು ಅಥವಾ ಯಾವ ತಿದ್ದುಪಡಿ ಮಾಡಲು ಅವಕಾಶವಿದೆ..?

  • ಪಡಿತರ ಚೀಟಿಯಲ್ಲಿ ಹೊಸದಾಗಿ ಕುಟುಂಬದ ಸದಸ್ಯರ ಸೇರ್ಪಡೆ ಮಾಡಲು ಅವಕಾಶ
  • ಪಡಿತರ ಚೀಟಿಯಲ್ಲಿ ಇರುವಂತ ನ್ಯಾಯಬೆಲೆ ಅಂಗಡಿ ಹಾಗೂ ವಿಳಾಸ ಬದಲಾವಣೆ ಮಾಡಲು ಅವಕಾಶ
  • ಪಡಿತರ ಚೀಟಿಯಲ್ಲಿ ಇರುವಂತ ಕುಟುಂಬದ ಮುಖ್ಯಸ್ಥರನ್ನು ಬದಲಾವಣೆ ಮಾಡಲು ಅವಕಾಶವಿದೆ
  • ಪಡಿತ ಚೀಟಿಯಲ್ಲಿ ಇರುವಂತ ಕುಟುಂಬದ ಸದಸ್ಯರು ಅಂದರೆ ಮರಣ ಹೊಂದಿದಂತ ಸದಸ್ಯರನ್ನು ತೆಗೆದುಹಾಕಲು ಅವಕಾಶವಿದೆ
  • ಪಡಿತರ ಚೀಟಿಯಲ್ಲಿ ಯಾವುದೇ ಸದಸ್ಯರ ಹೆಸರು ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ
  • ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಸಂಬಂಧಿಸಿದ ಯಾವುದೇ ಬದಲಾವಣೆ ಮಾಡಲು ಈ ಒಂದು ತಿದ್ದುಪಡಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ

 

WhatsApp Group Join Now
Telegram Group Join Now       

ಪಡಿತರ ಚೀಟಿ ತಿದ್ದುಪಡಿ ಮಾಡಲು ಬೇಕಾಗುವ ಅಗತ್ಯ ದಾಖಲಾತಿಗಳು..?

  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • 6 ವರ್ಷದ ಒಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ
  • ಮೊಬೈಲ್ ನಂಬರ್
  • ಇತರೆ ಅಗತ್ಯ ದಾಖಲಾತಿಗಳು

 

ರೇಷನ್ ಕಾರ್ಡ್ ತಿದ್ದುಪಡಿ ಯಾವ ರೀತಿ ಮಾಡಿಸಬೇಕು..?

ಹಾಗಾಗಿ ರೇಷನ್ (Ration card) ಕಾರ್ಡ್ ನಲ್ಲಿ ಯಾವುದೇ ರೀತಿ ತಿದ್ದುಪಡಿ ಮಾಡಲು ಬಯಸುವ ಕುಟುಂಬಗಳು ಕೂಡಲೇ ನಮ್ಮ ಹತ್ತಿರದ ಗ್ರಾಮ್ ಒನ್ (gram one), ಕರ್ನಾಟಕ ಒನ್, ಬೆಂಗಳೂರು ಒನ್ ಆನ್ಲೈನ್ ಕೇಂದ್ರಗಳಿಗೆ (online centre) ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5:00 ವರೆಗೆ (visit) ಭೇಟಿ ನೀಡಿ ರೇಷನ್ ಕಾರ್ಡ್ ನಲ್ಲಿ ಯಾವುದೇ ರೀತಿ ತಿದ್ದುಪಡಿ ಅಥವಾ ಬದಲಾವಣೆ ಮಾಡಿಸಬಹುದು ಅಥವಾ ಕೆಳಗಡೆ ನೀಡಿದ ಲಿಂಕ್ ಬಳಸಿಕೊಂಡು ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಬಹುದು

 

 ತಿದ್ದುಪಡಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಪ್ರಾರಂಭವಾಗುತ್ತದೆ..?

ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ವಾಸ ಮಾಡುವ ಅಂತ ತುಂಬಾ ಜನರು ಇದೀಗ ಹೊಸ ಪಡಿತರ ಚೀಟಿ ಪಡೆಯಲು ಕಾಯುತ್ತಿದ್ದಾರೆ, ಆದ್ದರಿಂದ ಮೊದಲು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಆದರೆ ರಾಜ್ಯ ಸರ್ಕಾರ ಇದೀಗ ಯಾವುದೇ ರೀತಿ ಹೊಸದಾಗಿ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿ ಕೊಟ್ಟಿಲ್ಲ, ಆದರೆ ಕೆಲವೊಂದು ಮಾಧ್ಯಮಗಳ ವರದಿಯ ಪ್ರಕಾರ ಈ ತಿಂಗಳಿನಲ್ಲಿ ಒಂದು ಅಥವಾ ಎರಡು ದಿನಗಳ ಕಾಲಾವಕಾಶ ಕೊಡಬಹುದು ಎಂಬ ಮಾಹಿತಿ ತಿಳಿದು ಬಂದಿದೆ

ಆದ್ದರಿಂದ ನಾವು ಹೊಸದಾಗಿ ಪಡಿತರ ಚೀಟಿ ಅರ್ಜಿ ಪ್ರಾರಂಭವಾದ ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಮ್ ಚಾನೆಲ್ ಗಳಲ್ಲಿ ಅಪ್ಡೇಟ್ ಮಾಡುತ್ತೇವೆ ಹಾಗಾಗಿ ಪ್ರತಿಯೊಬ್ಬರೂ ಸೇರಿಕೊಳ್ಳುವ ಪ್ರಯತ್ನ ಮಾಡಿ

1 thought on “Ration Card Application: ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಮತ್ತೆ ಅವಕಾಶ, ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ ಪ್ರಾರಂಭ”

Leave a Comment

?>